ಜೊತೆಗಾತಿಗೆ ಸಮರ್ಪಣೆ

ನಿಂಬೆಯ ಬನದಾಗ, ಹುಣ್ಣಿಮೆ ಬೆಳಕಲ್ಲಿ
ರಂಬೆಯ ಚೆಲುವನ್ನ ಹೊತ್ತು ಬಂದೋಳೆ..

ಕೊಂಬೆಯ ತುದಿಯ, ಹಿಂಡಿಂಡು ಹಣ್ಣನ್ನು
ಬೆರಗಾಗಿ ನೋಡಿ ನವಿಲಂಗೆ ಕುಣಿದೋಳೆ..

ತುಂಬೆಯ ಹೂವ ಸೆರಗಲ್ಲಿ ಹಿಡದು
ಶಿವನಂಥ ಚೆಲುವಂಗೆ ಕಾದು ಕುಂತೋಳೆ..

ಅಬ್ಬೆಯ ಮನಸಂತೆ, ಮಮತೆಯ ನಿಧಿಯಂತೆ
ಶಿವನೇ ಬಂದಾನು ನಿನ್ನ ವರಿಸೋಕೆ, 
ನಿನ್ನ ವರಿಸೋಕೆ...

Comments