ಮನದ ನೋವು



 ಕಣ್ಣಲ್ಲಿ  ಹುದುಗಿಟ್ಟ  ಕೋಟಿ  ಮಾತು ,
ತುಟಿಯಿಂದ  ಜಾರಲಿಲ್ಲ ..

ತುಟಿಯ  ಮೇಲಿನ  ನಗುವು 
ಮನಸಿನ ಕನ್ನಡಿ ಆಗಿರಲಿಲ್ಲ..

ಸಣ್ಣ ನಗುವು ಮನದ ನೋವ
ನಿನ್ನಿಂದ ಮರೆಮಾಚಿತಲ್ಲ...

ಜಾಣೆಯಾದ ನೀನು ಅದನು  ಗಮನಿಸದೆ
ಮೋಸ  ಹೋದೆಯಲ್ಲ !

ಕಣ್ಣಿನ  ಮಾತು  ಓದದೆ 
ನೀ  ತಪ್ಪು  ಮಾಡಿ  ಬಿಟ್ಟೆಯಲ್ಲ (?!)

Comments