ಗೆಳತಿಗೆ ಒಂದು ಪತ್ರ


ನಿನ್ನ ಕೆನ್ನೆ ಗುಳಿಯು ನನಗೆ ,
ಜೋಗದ ಸಿರಿಯಾ ಮರೆಸುತಿದೆ ..

ನನ್ನ ಮನದ ಸಣ್ಣ ಕಣವೂ , ನಿನ್ನ ಹೆಸರೇ ಜಪಿಸುತಿದೆ ,
ಒಮ್ಮೆ ನಿನ್ನ ಸ್ಪರ್ಶದಿಂದ ಅದರ ಶಾಪ ಹೋಗಬಹುದೆ..

ಸಾಲಗಾರನಾದರು ಸರಿಯೇ ನಿನ್ನ ನಗುವ ಸಾಲವ ಪಡೆವೆ,
ತಿರುಗೆ ನಿನಗೆ ಕೊಡದೆ ಹಾಗೆ ,ಅದರ ಜೊತೆಗೆ ಜೀವಿಸುವೆ ..

ನಿನಗೆ ಕೊಡಲು ನಾ ತಂದೆ ಎಲ್ಲ ತರಹದ ಹೂಗಳನು ,
ಸಣ್ಣ ಮುಳ್ಳ ಛಾಯೆ ಕಂಡು , ನಡುಗಿತು ನನ್ನೆದೆ ..

ನಲುಗ ಬೇಡ ಹೂವಿನ ಹಾಗೆ ,
ಹಿಮದ ರಾಶಿಯ ತರುವೆನು ನಿನ್ನ ಸಿಂಗರಿಸಲು ...

ನೆನಪಿಡು ನಲ್ಲೆ ,
ನನ್ನ ಉಸಿರೇ ನಾಚುವಂತೆ ನಾ ನಿನ್ನ ಪ್ರೀತಿಸುವೆ .

Comments

Post a Comment