ಗೆಳತಿ



ಸಾವಿರ ಸ್ವರಗಳ ಸುಂದರ ಗಾನದ
ಹಿತಕರ ಭಾವ ನೀನು..

ದದಡಿ ಸಪ್ಪಳಿಸುವ ಸಾಗರದಲೆಗಳ
ಅನನ್ಯ ಭಾವ ನೀನು..

ಸುಡುವ ಬಿಸಿಲಲಿ ಹೊಂಗೆಯ ನೆರಳಿನ
ನೆಮ್ಮದಿಯ ಭಾವ ನೀನು..

ಕಣ್ಣ ನೋಟದಲೆ ಮನವ ಅರಿಯುವ
ಜಾಣ ಚತುರೆ ನೀನು..

ಮೋಹಕ ಕಂಗಳ, ತಿಳಿಬೆಳದಿಂಗಳ
ಸುಂದರ ಸೊಬಗು ನೀನು ..

ಮೆಚ್ಚಿದ ಹುಡುಗನ ಇಚ್ಛೆಯನರಿಯುವ
ನೆಚ್ಚಿನ ಗೆಳತಿ ನೀನು..  

Comments