ಧರ್ಮ - ಸಂಕಟ


ಅಬ್ಬಬ್ಬಾ .. ಏನೀ ಧರ್ಮ - ಸಂಕಟ!!

ಶಾಂತಿಯೇ ಧರ್ಮದ ಮೂಲವೆನ್ನುವಿರಿ,
ಕೊಲ್ಲುತ್ತಲೇ ಧರ್ಮವ ಸ್ಥಾಪನೆಗೈದಿರಿ....!

ಎಲ್ಲಿಯೋ ಇರುವನು ಆಗುವ ಸೋದರ,
ಹೇಸುವುದಿಲ್ಲ ಮಾಡಲು ನೆರೆಮನೆಯವನ ಸಂಹಾರ..!

ಧರ್ಮ ಸ್ಥಾಪನೆಗೆ ದೇವಾಲಯಗಳು ಉರುಳಿತು,
ಧರ್ಮ ಸ್ಥಾಪನೆಗೆ ದೇಶವೇ ಒಡೆಯಿತು..!

ಕೇಸರಿಯೇ ಸರಿ ಎಂದು ಹೇಳಿಸುವ ಹಂಬಲ ನಮಗಿಲ್ಲ,
ಹಸಿರೇ ಉಸಿರಾಗಲಿ ಎಂದು ಉಸಿರುಗಟ್ಟಿಸುವ ಉತ್ಸಾಹ ನಿಮ್ಮಲ್ಲೇಕೆ ?

ನೀವೂ ಬದುಕಿ, ಬದುಕಲು ಬಿಡಿ!
ದ್ವೇಷದಿಂದ ಉಳಿಯದು ದೇಶ..

'ಮಾನವ ಜಾತಿ ತಾನೊಂದೆ ವಲಂ' ಎಂಬುದಾಗಲಿ ಎಲ್ಲರ ಸಂದೇಶ!

Comments

  1. Nimma Kavite tumba sundara hagu arta garbita vaagide..hege innu hechu kavite bareyiri

    ReplyDelete

Post a Comment