ಜಿಗುಪ್ಸೆ ಎಂದರೆ ...



ಕತ್ತಲೆಯ ಕಾನನದಿ ಕಣ್ಕಟ್ಟಿ ಕಾಡುವ
ಕರಿಮೋಹಿನಿಯ ಕರಿನೆರಳಂತೆ ...

ಅಕ್ಕರೆಯ ಆಸರೆಯ ಅಭಾವದಲಿ
ಬೆಳೆವ ಅನಾಥ ಶಿಶುವಂತೆ ...

ಸತ್ವ ಸವೆದ ಸಪ್ತ ಸ್ವರದ
ಸರಮಾಲೆಯಂತೆ ...

ನಡೆದ ದಾರಿಲೆ ನೂರು ಬಾರಿ ನಡೆದು
ನಿಧಿಯ ಹುಡುಕೊ ಮೂರ್ಖನಂತೆ ...

ಸ್ನೇಹದ ಸೆರಗ ಹಾಸಿ
ಸುಳಿಗೆ ಸಿಲುಕಿಸೊ ವೈರಿಯಂತೆ ...

ಮನವಿಲ್ಲದ ಮಡದಿಯೊಂದಿಗೆ
ಮೈಲಿಗೆಯಾದ ಮನದಿ ಆದ ಮೈತ್ರಿಯಂತೆ ...!

Comments