ಮುಂಜಾನೆ ಮಂಜಲ್ಲಿ


ಮುಂಜಾನೆ ಮಂಜಲ್ಲಿ, ಮುಸ್ಸಂಜೆ ರಂಗಲ್ಲಿ
ನಿನ್ನದೇ ಗುಂಗಲಿ ನಾ ಸೋತೆ ...
ನಿನದೇ ಗುಂಗಲಿ ನಾ ಸೋತೆ ..

ಹೇಳೇ ನೀ ಅಭಿಸಾರಿಕೆ, ಪ್ರೀತಿಯ ಪ್ರತಿಕಾರಕೆ
ನನ್ನನೆ ಏಕೆ ಸೂಚಿಸಿದೆ
ನೀ, ನನ್ನನೇ ಏಕೆ ಆರಿಸಿದೆ ...

ಬೆಳದಿಂಗಳಂತೆ ನೀನಂದು ಬಂದೆ
ಪ್ರೀತಿಯ ಸಿಂಚನವ ನೀ ಸೂಸಿದೆ
ಪ್ರೀತಿಯ ಸಿಂಚನವ ನೀ ಸೂಸಿದೆ ...

ಮರುಕ್ಷಣವು ಏನಾಯ್ತೋ, ನನ್ನೊಳಗೆ ನಾನಿಲ್ಲ
ಮರುಕ್ಷನವು ಏನಾಯ್ತೋ ನನ್ನೊಳಗೆ ನಾನಿಲ್ಲ
ಮನಸನ್ನು ಒಂದೇಟಿಗೆ ಕದ್ದೆಯಲ್ಲ ...

ಮುಂಜಾನೆ ಮಂಜಲ್ಲಿ, ಮುಸ್ಸಂಜೆ ರಂಗಲ್ಲಿ
ನಿನ್ನದೇ ಗುಂಗಲಿ ನಾ ಸೋತೆ ...
ನಿನದೇ ಗುಂಗಲಿ ನಾ ಸೋತೆ ..

Comments