ಪ್ರೀತಿ - ಭೀತಿ - ರೀತಿ

ಕನಸಿನೂರಲಿ  ನಿಂತ  ಕನಸೇ 
ನನಸಿನೂರಿಗೆ  ಪ್ರಯಾಣ  ನಡೆಸೆ 
ಪ್ರೀತಿಸುವ  ಹೃದಯವ  ಒಮ್ಮೆ  ಆಲಂಘಿಸೆ
ಮುಂದಿನದೆಲ್ಲ  ಬರಿ  ಸೊಗಸೇ ...

ನಿನ್ನ  ಮನವ  ಅರಿಯಲು  ಕಾತುರನಾಗಿ  ಬಂದೆ 
ಮುಚ್ಚಿದ ಕದವ  ಕಂಡು  ಬೆಪ್ಪಾಗಿ  ನಿಂದೆ 
ಕದವ  ತೆರೆದು  ಬರಮಾಡಿಕೊ  ಒಮ್ಮೆ  ಓ  ಗೆಳತಿ 
ತೆಗೆದು  ಹಾಕು  ಮನದಿಂದ  ನಾ ಅನಾಮಿಕನೆಂಬ  ಭೀತಿ...

ಕಣ್ಣೆದುರು  ನಿನ್ನದೇ  ಬಿಂಬ 
ಕನ್ನ್ಮುಚ್ಚಿದರೂ ಕಾಣುವುದು  ನಿನ್ನದೇ  ಪ್ರತಿಬಿಂಬ 
ಕಾಯಿಸುತ್ತಾ  ಕಾಡುವೆ  ಏಕೆ  ನೀ  ಮಾಯೆಯಾಗಿ 
ಸೇರು  ಬಾ  ನನ್ನೊಳಗೆ  ಮನದ  ಛಾಯೆಯಾಗಿ ...!
  

Comments

  1. Kevala Manada Chaayeyaagi alla...serali aake ninnolage baala sangaatiyaagi :)

    ReplyDelete
  2. Replies
    1. Thank you Raveesh :) i was just gng thru ur blog, very touchy ones kano.. y dont you start writing again?!

      Delete

Post a Comment