ಕನಸಿನ ಸೆರೆಯಲಿ


ನಡು ರಾತ್ರಿಯ ಬಿರುಸು ಮಳೆಯಲಿ ನಾವಿಬ್ಬರು
ಒಂದೇ ಕೊಡೆಯ ಅಡಿಯಲಿ ನಡೆದಿರಲು ...

ನೀ ನೆನೆಯಬಾರದೆಂದು ನಿನ್ನ ಹತ್ತಿರಕೆ ನಾ ಬರಲು
ನನ್ನೊಳಗೆ ಮಿಂಚಿನಂಥ ಸಂಚಲನ ಮೂಡಲು  ...

ಎನ್ನ ತೊಳ್ಗಳು ನಿನ್ನ ಬಳಸಲು
ಇಬ್ಬರಲು ಶುರುವಾಇತು ನಡುಕ ...

ಓರೆಗನ್ನಲಿ ಮೊಗವನು ನೋಡಲು ಕಾಣಲಿಲ್ಲ ಆತಂಕ
ಬಳಸಿದ ತೊಳ್ಗಳು ಮುನ್ನಡೆದವು ನಿನ್ನ ಭುಜದ ತನಕ ...

ಮನದೊಳಗೆ ಅಡಗಿದ ಭಾವನೆಗಳು ಬಹಳ
ಹೊರಬಂದ ಮಾತುಗಳು ಅತಿ ವಿರಳ ...

ಮಳೆಯ ಆರ್ಭಟ ಜೋರಾಗಲು, ಮರದಡಿ ನಿಂತೆವು ನಾವು
ಮನಸಿನ ತಲ್ಲಣ ಅತಿಯಾಗಲು, ತೊದಲುತ ನಿಂತೆನು ನಾನು ...

ಭಾಸವಾಯ್ತು ರವಿಯ ಕಿರಣ ಮೊಗದ ಮೇಲೆ ಬಿದ್ದ ಹಾಗೆ
ಅರಿಯಲಿಲ್ಲ ಆ ಮಳೆಯಲಿ ಇದು ಸಾಧ್ಯವಾಯ್ತು ಹೇಗೆ ...

ಕಣ್ತೆರೆಯಲು ಅರಿವಾಯ್ತು ನಾ ಇದ್ದದ್ದು ನನ್ನ ಕೊಟಡಿಯಲಿ
ನೀ ಬಂದು ಹೋದದ್ದು ಕೇವಲ ನನ್ನ ಕನಸಿನಲಿ ...

ನೆನಪಾಯ್ತು ನಿನ್ನ ನಾ ಕೊನೆಯ ಬಾರಿ ಭೇಟಿಮಾಡಿದ ಕ್ಷಣ
ನಿನ್ನ ನೆನಪಲ್ಲೇ ಕೊರಗುತಿದೆ ಈ ಮನ ಪ್ರತಿಕ್ಷಣ ...

"ಕನಸಿನೊಳಗಿನ ಮನಸಿನ ಕಥೆಯಿದು
ನನಸಾಗುವ ಮುನ್ನ ಚಿತೆಯೇರಿದ ವ್ಯಥೆಯಿದು ...!"

Comments

  1. E varsha ninna e kanasu nanasaagali..:)

    ReplyDelete
  2. hehe.. its a sad ending le .. first half nanasu aaadre saaku :P

    ReplyDelete
  3. "nirmala manasina mugda yuvaka!!" :P

    as i cant read kannada.. amma nange odi helidru..
    she was super impressed.. :) yeshtu channagi barithaane.. :D antha..

    :) great work..

    ReplyDelete
  4. ನಿನ್ನ ಕನಸು ತುಂಬಾ ಸುಪೆರ

    ReplyDelete

Post a Comment