ಬದುಕು ಇಸ್ಟೇನೆ


ಬದುಕೆಂಬುದು ಎರಡು ರಾತ್ರಿ ಹಾಗು ಒಂದು ಹಗಲಿನ ಸುಂದರ ಮಿಶ್ರಣ
ಅದರಲ್ಲುಂಟು ಕೋಟಿ ಕೋಟಿ ಭಾವನೆಗಳ ಸುಂದರ ಚಿತ್ರಣ ...

ಹೆತ್ತವರ ಮೇಣದ ಬೆಳಕಿನ ಆಸರೆಯಲ್ಲಿ ಒಂದು ರಾತ್ರಿ ಕಳೆದಿದೆ
ನಿನಗೆ ಬೆಳಕ ನೀಡಲು ಮೇಣವು ತನ್ನ ಜೀವವನ್ನೇ ಸವೆದಿದೆ ...

ಕಣ್ಣೀರ ಹನಿಗಳ ಮೇಲೆ ಬೆಳಗಿನ ಸೂರ್ಯನ ಕಿರಣ
ನೋವನ್ನು ಮರೆಯುವಷ್ಟರಲ್ಲೇ ಶುರು ಬಾಳಿನ ಹೋರಾಟದ ಪಯಣ ...

ತಿಳಿಯುವೆ ನೀನು ಜೀವನದ ಸುಂದರ ಸಂಜೆಯ ಸಂಗತಿ
ಜೊತೆಯಾದಾಗ ನಿನಗೊಬ್ಬಳು ಜೀವನ ಸಂಗಾತಿ ...

ಸಂಜೆಯ ಗುಂಗಿನಲ್ಲಿರುವಾಗಲೇ ಹೆಗಲೇರುವುದು ಜವಾಬ್ದಾರಿ
ಮಾಡಿಕೊಡಲು ಮುಂದಿನ ಪೀಳಿಗೆಗೆ ಸೂಕ್ತ ರಹದಾರಿ ...

ಇತರರಿಗೆ ಬೆಳಕ ಸೂಸುತ್ತ ಆಗಿರುತ್ತಿಯ ನೀನು ಹಣ್ಣು
ಬೆಳಕಾಗುವುದರಲ್ಲಿ ಬದುಕಿಗೆ ವಿದಾಯ ಹೇಳಿ ಸೇರಿರುತ್ತಿಯ ಮಣ್ಣು ...

Comments

Post a Comment