ವಲಸೆಯ ವರಸೆ


ನೆನೆದಂತೆ ದೊರೆಯಿತು ಕನಸಿನ ಉದ್ಯೋಗ
ಕಸಿಯಿತು ಹೆತ್ತವರ ಜೊತೆಯಿರುವ ಯೋಗ . . .

ಪರಿಣತಿ ಪಡೆಯಲು ದೂರದ ಊರಿಗೆ ವಲಸೆ
ಮನಸ ತುಂಬೆಲ್ಲಾ ಮನೆಗೆ ಓಡುವ ಆಸೆ . .

ಎತ್ತ ಕಣ್ಣಾಯಿಸಿದರು ಸುಂದರ ಸೌಧ
ಸೋತಿತು ಕೊಡಲು ಮನಸಿಗೆ ಮುದ . . .

ಎಲ್ಲವೂ ಇದ್ದರು ಏನೂ ಇಲ್ಲವೆಂಬ ಭಾವ
ಆವರಿಸಿತ್ತು ಅಮ್ಮನ ಪ್ರೀತಿಯ ಅಭಾವ . . .

ಕಣ್ಣೆದುರು ಇದ್ದರು ಭಕ್ಷ ಬ್ಹೊಜ್ಯದ ಹೊಳೆ 
ಕಾಡುತಿಹುದು ಸದ್ದು ಮಾಡುತಿದ್ದ ಅಮ್ಮನ ಕೈಬಳೆ. . .

ಚಿನ್ನದ ಪಂಜರದೊಳಗಿನ ಗಿಳಿಯ ರೀತಿ
ಸದ್ಯದ  ನನ್ನ ಈ ಪರಿಸ್ಥಿತಿ . . .

Comments

Post a Comment