ಎಚ್ಹೆತ್ತುಕೋ ಕನ್ನಡಿಗ


ಜಯ ಭಾರತ ಜನನಿಯ ತನುಜಾತೆ ಜಯಹೇ ಕರ್ನಾಟಕ ಮಾತೆ
ರಚಿಸಿದರು ಕುವೆಂಪು ಅಂದು ಈ ನಮ್ಮ ನಾಡಗೀತೆ
ಬಳಸುತಿದ್ದಾರೆ ಕೆಲವರು ಇಂದು, ತುಂಬಿಸಿಕೊಳ್ಳಲು ತಮ್ಮ ಬ್ಯಾಂಕ್ ಖಾತೆ...!

ಕಾನ್ವೆಂಟ್ ಮಕ್ಕಳನ್ನು ಕೇಳಿ ನೋಡಿ 'ಮಕ್ಕಳೇ ಗೊತ್ತೇ ನಿಮಗೆ ಹಲ್ಮಿಡಿ ?'
ಮರುಕ್ಷಣವೇ ಒಬ್ಬರು ಬಿಡದೇ ಆಗ್ತಾರೆ ಎಲ್ಲರೂ ಗಡಿಬಿಡಿ
ಬರಬಾರದಿತ್ತು ಸ್ವಾಮಿ ನಮ್ಮ ಭಾಷೆಗೆ ಈ ಪರಿಯ ಟ್ರಾಜಿಡಿ...!

ಸಾಕುಮಾಡಿ ಗೆಳೆಯರೇ ಹೇಳುವುದು ಇತರರಿಗೆ ಬುದ್ದಿ
ಮೊದಲು ಮಾಡಿಕೊಳ್ಳಿ ನಿಮ್ಮ ಮನಃ ಶುದ್ದಿ
ತಾನಾಗಿಯೇ ಹೊಂದುವುದು ನಮ್ಮ ನಾಡು ಸಮೃದ್ಧಿ...

ಹೇಳ್ಕೊಂಡು ತಿರುಗಾಡ್ಬೇಡಿ ನಮ್ಮ ಭಾಷೆನಾ ಲೊಕಲ್ಲು
ಇವೆಲ್ಲ ನಿಮ್ಮಂಥ ಪುಂಡರು ಸೃಷ್ಟಿಸಿರುವ ಗಿಮಿಕ್ಕು ಮಾಡೋದಕ್ಕೆ ರೋಲ್ ಕಾಲು
ವಿಶ್ವಾದ್ಯಂತ ಸಹಸ್ರಾರು ಕನ್ನಡಿಗರು ಮೊಳಗಿಸಿದ್ದಾರೆ ನಮ್ಮ ಭಾಷೆಯ ಬೆಲ್ಲು...

ಎಲ್ಲೋ ಕೇಳಿದ ನೆನಪು ,

"ತುಂಬು ಪ್ರತಿ ಎದೆಯಲ್ಲಿ ಬಗೆ ಬಗೆ ಚಿತ್ರವಾ
ತುಂಬು ಪ್ರತಿ ಮನಸಲ್ಲಿ ಛಲ, ಬಲ , ಸ್ಥೈರ್ಯವಾ ...

ಬದಲಾಗುವುದು ಲೋಕ ನೀ ಬದಲಾದರೆ
ಸರಿಯಾಗುವುದು ಸಮಾಜ ನೀ ಮೊದಲಾದರೆ..."

ದಯವಿಟ್ಟು ಒಮ್ಮೆ ಆಲೋಚಿಸು
ಓ ಪ್ರೀತಿಯ ಕನ್ನಡಿಗ...

Comments