ಬಾ ನಲ್ಲೆ ರಾಗವಾಗಿ...

ಬಾ ನಲ್ಲೆ ರಾಗವಾಗಿ
ಕೇಳೆನ್ನ ಭಾವವಾಗಿ ....

ಮಿಂಚಂತೆ ತೇಲುವ ನಾದ ಹಂಸವೇ
ನಿಂತಲ್ಲೇ ಕುಣಿಸುವ ನವಿಲ ಆತ್ಮವೇ...

ನೀ ಜೀವ ತಂತಿಯ ಮೀಟಲಾರೆಯ
ನಿರ್ಜಿವ ದೇಹಕೆ ಜೀವಸೆಲೆಯ ತುಂಬಲಾರೆಯ...

ನೀ ನನ್ನ ಬದುಕಿನ ಸ್ವರ ಸಂಗಮ
ನಿನ್ನಂಥರಾಳವೇ ಬಾನ ಚಂದ್ರಮ...

ನೀನಿಲ್ಲದ ಬದುಕು ಪಲ್ಲವಿ ಇಲ್ಲದ ಚರಣ
ನೀನೊಮ್ಮೆ ಒಲಿದರೆ ಮುತ್ತಿನ ತೋರಣ...

ಸುವಾಸಿತ ಮಲ್ಲಿಗೆಯಂತಿದ್ದ ಬಾಳು, ಇಂದಾಗಿದೆ ಕನಕಾಂಬರ
ಸೋಬಗಿಲ್ಲದ ಬೆಡಗು ! ಕೇವಲ ಆಡಂಬರ ...

Comments

Post a Comment